ಆಲಿಯಾ ಭಟ್ ಲಾಕ್ಡೌನ್ ಮುಗಿದ ನಂತರ ತಮ್ಮ ಸಿನಿಮಾಗಳಿಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾಗಳಿಗೆ ಸಂಬಂಧಿಸಿದ ಚರ್ಚೆಗಳಿಗಾಗಿ ಹೊಸ ಕಚೇರಿ ರೆಡಿಯಾಗಿದೆ.
ತುಂಬಾ ವಿಶಾಲವಾದ ಜಾಗದಲ್ಲಿ ಆಲಿಯಾರ ಕಚೇರಿ ತಲೆ ಎತ್ತಿದ್ದು, ಇದರ ಒಳಾಂಗಣ ವಿನ್ಯಾಸವನ್ನು ಖುದ್ದು ಅವರೇ ಮಾಡಿಸಿದ್ದಾರಂತೆ.
ಡಿಯರ್ ಜಿಂದಗಿ ಸಿನಿಮಾದ ಕಲಾ ನಿರ್ದೇಶಕ ರುಪಿನ್ ಅವರ ಸಹಾಯದೊಂದಿಗೆ ಆಲಿಯಾ ತಮ್ಮ ಕಚೇರಿಯ ಒಳಾಂಗಣ ವಿನ್ಯಾಸ ಮಾಡಿದ್ದಾರೆ.
ಆಲಿಯಾರಿಗೆ ಪರಿಸರ ಹಾಗೂ ಪ್ರಾಣಿಗಳೆಂದರೆ ತುಂಬಾ ಇಷ್ಟ. ಅದರಂತೆ ಅವರ ಕಚೇರಿಯಲ್ಲಿ ಅವರ ಮುದ್ದಿನ ಸಾಕು ಬೆಕ್ಕಿಗೂ ಜಾಗ ಸಿಕ್ಕಿದೆ. ಉಳಿದಂತೆ ಕಚೇರಿಯ ಒಳಗೂ ಪುಟ್ಟ ಪುಟ್ಟ ಹೂವಿನ ಗಿಡ ಹಾಗೂ ಸಸಿಗಳನ್ನು ಇಡಲಾಗಿದೆ.
ಆಲಿಯಾರ ಕಚೇರಿಗೆ ಎಟರ್ನಲ್ ಸನ್ಶೈನ್ ಎಂದು ಹೆಸರಿಡಲಾಗಿದ್ದು, ಹೆಸರಿನ ಲೊಗೊದಲ್ಲಿ ಮುದ್ದಿನ ಬೆಕ್ಕಿನ ಚಿತ್ರವೂ ಇದೆ. ಆಲಿಯಾರ ವಿಶಾಲವಾದ ಸ್ಟೈಲಿಶ್ ಕಚೇರಿಯ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.